Friday, October 19, 2012

ನವಿಲು ಕೋಸಿನ ರಾಯತ

ಸಾಮಾಗ್ರಿಗಳು

ನವಿಲು ಕೋಸು - ಒಂದು, ನೀರುಳ್ಳಿ- ಒಂದು, ಬೆಳ್ಳುಳ್ಳಿ- ಎರಡು ಮೂರು ಎಸಳುಗಳು, ಹಸಿಮೆಣಸು -ಒಂದು, ಜೀರಿಗೆ- ಒಂದು ಚಮಚ, ತುಪ್ಪ- ಎರಡು ಚಮಚ, ಕರಿಬೇವಿನ ಎಲೆ- ಸ್ವಲ್ಪ, ಮೊಸರು - ಅರ್ಧ ಲೀಟರ್, ರುಚಿಗೆ ಬೇಕಷ್ಟು ಉಪ್ಪು, ನೀರು.



ಮಾಡುವ ಕ್ರಮ

ನೀರುಳ್ಳಿ, ಬೆಳ್ಳುಳ್ಳಿ, ಹಸಿಮೆಣಸುಗಳನ್ನು ಸಣ್ಣ ಸಣ್ಣದಾಗಿ ಹೆಚ್ಚಿಕೊಳ್ಳಬೇಕು. ಆಮೇಲೆ ನವಿಲು ಕೋಸಿನ ಸಿಪ್ಪೆ ಸುಲಿದು ಅದನ್ನೂ ಸಣ್ಣಕ್ಕೆ ಹೆಚ್ಚಬೇಕು. ಮತ್ತೆ, ಒಂದು ಬಾಣಲೆಯಲ್ಲಿ ತುಪ್ಪ ಹಾಕಿ ಜೀರಿಗೆ ಕರಿಬೇವಿನ ಎಲೆಯ ಒಗ್ಗರಣೆ ಕೊಡಬೇಕು. ಇದಕ್ಕೆ ನೀರುಳ್ಳಿ, ಬೆಳ್ಳುಳ್ಳಿ, ಹಸಿಮೆಣಸುಗಳನ್ನು ಸೇರಿಸುತ್ತಾ ಬರಬೇಕು. ಕೊನೇಗೆ ನವಿಲು ಕೋಸನ್ನೂ ಹಾಕಿ, ಉಪ್ಪು (ಬೇಕಾದರೆ ನೀರು ಹಾಕಿ) ಹಾಕಿ ಬೇಯಲು ಬಿಡಬೇಕು. ಬೇಯಲು ಹತ್ತು ನಿಮಿಷ ಬೇಕಾಗುತ್ತದೆಬೆಂದ ಮೇಲೆ ಅದನ್ನು ತಣಿಯಲು ಬಿಟ್ಟು, ತಣಿದ ಮೇಲೆ ಮೊಸರು ಸೇರಿಸಿದರಾಯಿತು.

3 comments:

  1. This comment has been removed by the author.

    ReplyDelete
  2. ರಶ್ಮಿ ಅಭಯ ಸಿಂಹOctober 20, 2012 at 5:10 PM

    Thanks ಮಹೇಶಪ್ಪಚ್ಚಿ!

    ReplyDelete