Thursday, October 11, 2012

ಸುಲಭ ಪುಲಾವ್!


ಸಾಮಾಗ್ರಿಗಳು

ಅಕ್ಕಿ- ಒಂದು ಕಪ್, ಆಲೂ ಗಡ್ಡೆ - ಒಂದು, ಬೀನ್ಸ್- ಸ್ವಲ್ಪ, ಕ್ಯಾರೆಟ್- ಎರಡು, ಟೊಮ್ಯಾಟೊ- ಒಂದು, ಹಸಿಮೆಣಸು- ಎರಡು ಅಥವಾ ಮೂರು, ಜೀರಿಗೆ- ಒಂದು ಚಮಚ, ಚೆಕ್ಕೆ, ಲವಂಗ- ಸ್ವಲ್ಪ, ಅರಶಿನ- ಒಂದು ಚಮಚ, ಪುದೀನಾ- ಒಂದು ಕಪ್, ಬೆಳ್ಳುಳ್ಳಿ- ಹತ್ತು ಎಸಳು, ನೀರುಳ್ಳಿ- ಎರಡು, ತುಪ್ಪ/ಎಣ್ಣೆ - ನಾಲ್ಕು ಚಮಚ, ಬ್ರೆಡ್ - ಮೂರು ಸ್ಲೈಸ್ (ಬೇಕಾದರೆ ಮಾತ್ರ), ನೀರು, ನಿಂಬೆ ಹುಳಿ- ಒಂದು, ರುಚಿಗೆ ತಕ್ಕಷ್ಟು ಉಪ್ಪು.


ಮಾಡುವ ಕ್ರಮ

ಅಕ್ಕಿಯನ್ನು ಚೆನ್ನಾಗಿ ತೊಳೆದು ಅಕ್ಕಿಯ ಅಳತೆಯ ಎರಡು ಪಟ್ಟು ನೀರು ಹಾಕಿ ಕುಕ್ಕರ್ ನಲ್ಲಿ ಬೇಯಿಸಬೇಕು. ಇನ್ನೊಂದು ಕಡೆ ಪುದೀನಾ, ಹಸಿಮೆಣಸು, ನೀರುಳ್ಳಿ, ಬೆಳ್ಳುಳ್ಳಿ, ಕ್ಯಾರೆಟ್, ಬೀನ್ಸ್, ಟೊಮ್ಯಾಟೋ, ಆಲೂಗಡ್ಡೆಗಳನ್ನು ಸಣ್ಣ ಸಣ್ಣ ದಾಗಿ ಹೆಚ್ಚಿಕೊಳ್ಳಬೇಕು. ಆಮೇಲೆ ಒಂದು ಬಾಣಲೆಗೆ ನಾಲ್ಕು ಚಮಚ ತುಪ್ಪ/ಎಣ್ಣೆ ಹಾಕಿ, ಅದಕ್ಕೆ ಜೀರಿಗೆ, ನೀರುಳ್ಳಿ, ಬೆಳ್ಳುಳ್ಳಿಗಳನ್ನು ಹಾಕಿ ಬಾಡಿಸಬೇಕು. ನಂತರ ಪುದೀನಾ ಹಾಕಿ ಮತ್ತೊಮ್ಮೆ ಕಲಸಬೇಕು. ಇದಾದ ಮೇಲೆ ಕ್ಯಾರೆಟ್, ಬೀನ್ಸ್, ಆಲೂಗಡ್ಡೆ ಗಳನ್ನು ಹಾಕಬೇಕು. ಅರಶಿನ, ಉಪ್ಪು ಹಾಕಿ ಕಲಸಿ, ಆಮೇಲೆ ಟೊಮ್ಯಾಟೋವನ್ನೂ ಹಾಕಿ ಮುಚ್ಚಬೇಕು. ಇದು ಸಣ್ಣ ಉರಿಯಲ್ಲೇ ಬೇಯಲಿ. ಹದಿನೈದು ನಿಮಿಷಗಳಷ್ಟು ಹೊತ್ತು ಬೇಯಲು ಬೇಕಾಗುತ್ತದೆ. ಬೆಂದ ಮೇಲೆ ನಿಂಬೆ ಹಣ್ಣು ಹಿಂಡಿ ಹಾಕಿ ಚೆನ್ನಾಗಿ ಕಲಸಬೇಕು. ಈಗ, ಬೆಂದಿರುವ ಅನ್ನವನ್ನೂ ಹಾಕಿದರೆ ಪುಲಾವ್ ಸಿದ್ಧ.

(ಬ್ರೆಡ್ ಹಾಕಲು ಇಷ್ಟವಿದ್ದರೆ ಎರಡು ಮೂರು ಸ್ಲೈಸ್ ಬ್ರೆಡ್ ಗಳನ್ನು ಚೌಕಾಕಾರದಲ್ಲಿ ಕತ್ತರಿಸಿ ಕಾವಲಿಯಲ್ಲಿ ತುಪ್ಪ/ಎಣ್ಣೆ ಹಾಕಿ ಹುರಿಯಬೇಕು. ಕೊನೇಗೆ ಪುಲಾವಿಗೆ ಮಿಶ್ರ ಮಾಡಿದರಾಯಿತು)

12 comments:

  1. Thanks for the tips Rashmi, will try it.

    ReplyDelete
    Replies
    1. ರಶ್ಮಿ ಅಭಯ ಸಿಂಹOctober 12, 2012 at 1:35 PM

      You are most welcome! please try. Hope you will like it.

      Delete
  2. thnxxx...nim pulav thumba ista aythu.. maneli try madteeni....

    ReplyDelete
    Replies
    1. ರಶ್ಮಿ ಅಭಯ ಸಿಂಹOctober 12, 2012 at 1:37 PM

      ಖಂಡಿತಾ ಮಾಡಿ. ಬಹಲ ಸುಲಭ ಇದು.

      Delete
  3. superb.. ;) its really a helpful tips for me.. ;)

    ReplyDelete
    Replies
    1. ರಶ್ಮಿ ಅಭಯ ಸಿಂಹOctober 12, 2012 at 1:38 PM

      ಮಾಡಪ್ಪಾ.. ನನ್ನ ಬ್ಲಾಗ್ ನೋಡಿ ನೀನು ಅಡಿಗೆ ಮಾಡಿದ್ದೇ ಆದರೆ, ಧನ್ಯೋಸ್ಮಿ!

      Delete
  4. ರಷ್ಮಿ, ನಿಮ್ಮ ರೆಸಿಪೀಗಳು ತುಂಬಾ ಚೆನ್ನಾಗಿವೆ. ಪ್ರಥಮ ಬಾರಿ ನಿಮ್ಮ ಬ್ಲಾಗ್ ನೋಡಿದ್ದು ಇವತ್ತು. ಎಲ್ಲಾ ವೀಡೀಯೋ ನಾನು ನೋಡಿದೀನಿ. ನಿಮ್ಮ ಪ್ರೆಸೆಂಟೇಶನ್ ನನಗೆ ತುಂಬಾ ಇಷ್ಟ ಆಯಿತು. ನಮ್ಮ ಮಾವನವರಿಗೂ ನಿಮ್ಮ ವೀಡಿಯೋ ಗಳು ತುಂಬಾ ಇಷ್ಟ ವಾಯಿತು. :) Congratulations and keep up the good work :)

    ReplyDelete
    Replies
    1. ರಶ್ಮಿ ಅಭಯ ಸಿಂಹOctober 12, 2012 at 1:40 PM

      ಎಷ್ಟು ಚೆನ್ನಾಗಿ ಬರೆದಿದ್ದೀರಿ! ಬ್ಲಾಗ್ ನೋಡಿದ ನಿಮಗೆ, ನಿಮ್ಮ ಮಾವನವರಿಗೆ Thanks! ಈ ಥರದ ಪ್ರತಿಕ್ರಿಯೆಗಳನ್ನು ನೋಡಿದ ಮೇಲೆ ಉತ್ಸಾಹ ಹೆಚ್ಚಾಗುತ್ತದೆ!!

      Delete
  5. tumba ruchi agide annistide rashmi. good.
    Geervani

    ReplyDelete
    Replies
    1. ರಶ್ಮಿ ಅಭಯ ಸಿಂಹOctober 12, 2012 at 5:50 PM

      ನಿಮಗೆ ಅನಿಸಿದ್ದುಸರಿ. ರುಚಿ ಆಗಿತ್ತು! ಛೆ! ನಾನು ನಿಮ್ಮನ್ನು ಆ ದಿನ ಊಟಕ್ಕೆ ಕರೀಬೇಕಿತ್ತು...

      Delete
  6. 'ಸುಲಭ ಪುಲಾವ್' ವಿಧಾನ ಚೆನ್ನಾಗಿದೆ. ಜತೆಗೆ typical ಮಂಗಳೂರು ಕನ್ನಡ ಕೂಡಾ. ಬೆಂಗಳೂರಿಗೆ ಬಂದ ಮೇಲೆ ಮಂಗ್ಳೂರಿನ ಉಚ್ಚಾರಣೆ ಮರೆತೇ ಹೋಗಿತ್ತು. ಇಲ್ಲಿಗೆ ಬರೋ ಮಂಗ್ಳೂರವ್ರೂ ಇಲ್ಲಿಂದೇ ಉಚ್ಚಾರ ಬಳಸೋದ್ರಿಂದ ವೀಡಿಯೊದಲ್ಲಿನ ನಿಮ್ಮ ಉಚ್ಚಾರಣೆ ವಿಶೇಷ ಅನ್ನಿಸ್ತು. ಚೆನ್ನಾಗಿದೆ :-)

    Kailasa

    ReplyDelete
    Replies
    1. ರಶ್ಮಿ ಅಭಯ ಸಿಂಹOctober 14, 2012 at 4:03 PM

      ಕೈಲಾಸ ಅವರೇ,
      ನೀವು ಹೇಳಿದ್ದು ನಿಜ. ಎಲ್ಲಿಂದಲೋ ಬಂದ ನಮ್ಮಂಥವರಿಗೆ ಸಹಜವಾಗಿ ಭಾಷೆ ಕಲಸು ಮೇಲೋಗರ ಆಗುತ್ತದೆ. ಹಾಗೆ ಮಾತಾಡುತ್ತಾ ಮಾತಾಡುತ್ತಾ ನಮ್ಮದೇ ರೀತಿಯ ಭಾಷಾ ಪ್ರಯೋಗವೇ ರೂಪುಗೊಳ್ಳುತ್ತದೆ. ನಿಮ್ಮ ಪ್ರತಿಕ್ರಿಯೆ ಓದಿ ಸಂತೋಷ ಆಯ್ತು.

      Delete