Friday, October 26, 2012

ಬಾಳೆ ಹಣ್ಣು ದೋಸೆ


ಸಾಮಗ್ರಿಗಳು

ಅಕ್ಕಿ - ಒಂದು ಕಪ್, ಬಾಳೆ ಹಣ್ಣು - ನಾಲ್ಕೈದು, ಉಪ್ಪು, ನೀರು, ತುಪ್ಪ/ಎಣ್ಣೆ.

ಮಾಡುವ ಕ್ರಮ

ಅಕ್ಕಿಯನ್ನು ಒಂದು ಗಂಟೆ ನೆನೆ ಹಾಕಬೇಕು. ಆಮೇಲೆ ಅದನ್ನು ಉಪ್ಪು ಸೇರಿಸಿ ಸ್ವಲ್ಪ ರುಬ್ಬಿ, ಬಾಳೆ ಹಣ್ಣನ್ನು ಸುಲಿದು ಅದಕ್ಕೆ ಸೇರಿಸಬೇಕು. ನಂತರ ಮತ್ತೊಮ್ಮೆ ನುಣ್ಣಗಾಗುವರೆಗೆ ರುಬ್ಬಿದರೆ ಬಾಳೆ ಹಣ್ಣು ದೋಸೆಗೆ ಹಿಟ್ಟು ತಯಾರು. ಒಂದು ಕಾವಲಿಗೆಗೆ ತುಪ್ಪ/ಎಣ್ಣೆ ಸವರಿ ದೋಸೆ ಎರೆದು ಎರಡೂ ಕಡೆ ಬೇಯಿಸಬೇಕು.

4 comments:

  1. ರುಚಿವರ್ಧನOctober 26, 2012 at 2:04 PM

    ಬೀಸುವಾಗಲೇ ಬಾಳೇಹಣ್ಣಿನ ಸಿಹಿ ವರ್ಧಿಸುವಂತೆ ಸ್ವಲ್ಪ ಬೆಲ್ಲ ಸೇರಿಸಿದರೆ ನಂಚಿಕೊಳ್ಳಲು ಬರಿಯ ತುಪ್ಪ ಅಥವಾ ಬೆಣ್ಣೆ ಧಾರಾಳವಾಗುತ್ತದೆ. ಬರಿಯ ಹಸಿ ಕಾಯಿ ಚಟ್ನಿ ಇದರಂತೂ...... ವಾಹ್!
    ರುಚಿವರ್ಧನ

    ReplyDelete
    Replies
    1. ಎ.ಪಿ. ಗೌರೀಶಂಕರOctober 27, 2012 at 7:56 PM

      ಹೌದು, ಬೆಲ್ಲ ಮೊದಲು ಬೀಳಲೇ ಬೇಕು. ಅದು ಬಾಳೇಹಣ್ಣು ಮುಳುಕಕ್ಕೆ ಸಮಸಮಾವಾದರೆ ರುಚಿ ಹೆಚ್ಚು.
      ಗೌರೀಶಂಕರಜ್ಜ

      Delete
    2. ರಶ್ಮಿ ಅಭಯ ಸಿಂಹOctober 30, 2012 at 6:38 AM

      ಧಾರಾಳವಾಗಿ!ಬಾಳೆ ಹಣ್ಣಿನ ಸಿಹಿ ಸಾಕು ಅಂತ ಸಿಹಿ ಕಡಿತಗೊಳಿಸಿದೆನಷ್ಟೆ :)

      Delete
    3. ರಶ್ಮಿ,ಗೌರೀಶಂಕರಜ್ಜ ಬೆಲ್ಲಕ್ಕೂ ಸಿಹಿ ಕಡಿಮೆ ಎಂದಾರು;)

      Delete