Tuesday, October 2, 2012

ಆಲೂ ಪೋಹಾ!


ಸಾಮಾಗ್ರಿಗಳು

ದಪ್ಪ ಅವಲಕ್ಕಿ - 2 ಕಪ್, ಆಲೂ ಗಡ್ಡೆ - ಒಂದು, ನೀರುಳ್ಳಿ - ಎರಡು, ಹಸಿ ಮೆಣಸು - ಎರಡು, ಟೊಮ್ಯಾಟೊ - ಒಂದು, ಕೊತ್ತಂಬರಿ ಸೊಪ್ಪು- ಸ್ವಲ್ಪ, ನಿಂಬೆ ಹುಳಿ - ಒಂದು, ಜೀರಿಗೆ - ಎರಡು ಚಮಚ, ಎಣ್ಣೆ - ಮೂರು ಚಮಚ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ಕ್ರಮ

ದಪ್ಪ ಅವಲಕ್ಕಿಯನ್ನು ತೊಳೆದು ಸ್ವಲ್ಪ ನೀರು ಚಿಮುಕಿಸಿ ನೆನೆಸಿಡಬೇಕು. ನೀರನ್ನೆಲ್ಲ ಅವಲಕ್ಕಿ ಹೀರುವ ತನಕ ಅದನ್ನು ಮುಚ್ಚಿಡಬೇಕು. (ಹದಿನೈದರಿಂದ ಇಪ್ಪತ್ತು ನಿಮಿಷ) ಟೊಮ್ಯಾಟೋ, ನೀರುಳ್ಳಿ, ಹಸಿ ಮೆಣಸು, ಕೊತ್ತಂಬರಿ ಸೊಪ್ಪುಗಳನ್ನು ಸಣ್ಣದಾಗಿ ಹೆಚ್ಚಿಟ್ಟುಕೊಳ್ಳಬೇಕು. ಕೊನೆಗೆ ಆಲೂಗಡ್ಡೆಯ ಸಿಪ್ಪೆ ತೆಗೆದು ಅದನ್ನೂ ಸಣ್ಣ ಹೋಳುಗಳನ್ನಾಗಿ ಮಾಡಿಕೊಳ್ಳಬೇಕು. ಇದಾದ ಮೇಲೆ, ಒಂದು ಬಾಣಲೆಯಲ್ಲಿ ಮೂರು ಚಮಚ ಎಣ್ಣೆ ಬಿಸಿ ಮಾಡಿ, ಆಲೂಗಡ್ಡೆ ಹೋಳುಗಳು ಮತ್ತು ಜೀರಿಗೆಯನ್ನು ಹಾಕಬೇಕು. ಆಮೇಲೆ ನೀರುಳ್ಳಿ, ಹಸಿ ಮೆಣಸು ಹಾಕಿ ಒಮ್ಮೆ ಕಲಸಿ ಅರಶಿನ ಹಾಕಿ ಕಲಸಿ ಟೊಮ್ಯಾಟೋವನ್ನೂ ಹಾಕಬೇಕು. ಒಂದೆರಡು ನಿಮಿಷ ಸೌಟಿನಲ್ಲಿ ತಿರುಗಿಸಿದ ಮೇಲೆ ಉಪ್ಪು ಹಾಕಿ ಮತ್ತೊಮ್ಮೆ ಕಲಸಿ ಮುಚ್ಚಿಡಬೇಕು. (ಬೇಯುವಾಗ ಆಲೂಗಡ್ಡೆ ಸುಡಬಹುದು. ಅದಕ್ಕೆ ಒಂದೆರಡು ಸಲ ಮುಚ್ಚಲ ತೆಗೆದು ಸೌಟು ಹಾಕಿ ಕಲಸಿದರೆ ಒಳ್ಳೆಯದು) ಐದರಿಂದ ಹತ್ತು ನಿಮಿಷ ಬೆಂದ ಮೇಲೆ ಉದುರು ಉದುರಾಗಿರುವ ಅವಲಕ್ಕಿಯನ್ನು ಬಾಣಲೆಗೆ ಹಾಕಿ ಚೆನ್ನಾಗಿ ಮಿಶ್ರ ಮಾಡಿ ಒಲೆ ಆರಿಸಬೇಕು. ಆಮೇಲೆ ನಿಂಬೆ ಹಣ್ನನ್ನು ಹಿಂಡಿ, ಕಲಸಿ ಕೊನೆಯದಾಗಿ ಕೊತ್ತಂಬರಿ ಸೊಪ್ಪಿನ ಅಲಂಕಾರ ಮಾಡಬೇಕು.

10 comments:

  1. ಊಹಾ ಮಾಡುವ ಅಗತ್ಯವಿಲ್ಲದಂತೆ ಪೋಹಾ ತಿನ್ನಿಸಿದ್ದಕ್ಕೆ ಥೆಂಕೂಸ್
    -ಅವ

    ReplyDelete
    Replies
    1. Thanks ಇಲ್ಲಿಗೆ ಬಂದು ತಿಂದ ಮೇಲೆ ಹೇಳಿದ್ದರೆ ಸಾಕಿತ್ತು ! ಮೆಚ್ಚಿಕೊಂಡದ್ದಕ್ಕೆ ನಿಮಗೂ thanks!!

      -ರಅ !

      Delete
  2. bendiro alu na? atva hage hakbeka? hage hakidre alu beyata??

    ReplyDelete
    Replies
    1. Bendiruva aloo alla. Hasiyaadaddu. Video dalli torisida haage haaki. Beyuttade.

      Delete
  3. ರುಕ್ಮಿಣಿಮಾಲಾOctober 9, 2012 at 11:42 AM

    ಪೋಹಾ ಬಲು ರುಚಿ. ನಾವು ರಾಜಸ್ಥಾನಕ್ಕೆ ಹೋಗಿದ್ದಾಗ ಇದನ್ನು ಅಲ್ಲಿಯ ಖಾನಾವಳಿಯಲ್ಲಿ ತಿಂದಿದ್ದೆವು. ಅಕ್ಷರಿ ಯಾವಾಗಲೂ ಮಾಡುತ್ತಿರುತ್ತಾಳೆ.

    ReplyDelete
    Replies
    1. ರಶ್ಮಿ ಅಭಯ ಸಿಂಹOctober 10, 2012 at 11:45 AM

      ಹೌದೌದು.. ರುಚಿ ಬಹಳ! ರಾಜಸ್ಥಾನದ ರುಚಿ ಬೇರೆಯದೇ ಥರ ಇರಬಹುದಲ್ಲಾ? ಅಕ್ಷರಿಯ ಕೈಯಲ್ಲಿ ಮಾಡಿಸಿ ತಿನ್ನುವೆ ಒಂದು ದಿನ!

      Delete
  4. ರಶ್ಮಿ ಆ ದಿನ ಬೇಗ ಬರಲಿ.

    ReplyDelete
  5. avalakkiyannu hindina dina rathri akki tholeda haage eradu sala thoLedu matte neeru chimukisi ondu tatte muchchi ittu maadidare innu superb agiruttade.. nammallige banda nentarobbaru nammalli madiddaru.adu maharastrian poha antha hesaranthe. enne kayalittu jeerige, kadalebeLe, kadle kaaLu, haaki eeruLLi,hasimenasu, aalugadde, arishina, karada pudi, uppu haaki baadisi nantara nenda avalakki haaki kottambari soppu udurisidare superr! maadi noodu!
    Akshari

    ReplyDelete
    Replies
    1. ರಶ್ಮಿ ಅಭಯ ಸಿಂಹOctober 17, 2012 at 10:39 PM

      ಖಂಡಿತಾ ಮಾಡಿ ನೋಡ್ತೇನೆ! ಒಳ್ಳೇದಾಯ್ತು ಹೇಳಿದ್ದು.

      Delete