ಸಾಮಾಗ್ರಿಗಳು
ಸ್ವೀಟ್ ಕಾರ್ನ್ - ಒಂದು ಕಪ್, ಜೀರಿಗೆ- ಎರಡು ಟೀ ಸ್ಪೂನ್, ಕಡ್ಲೆ ಹಿಟ್ಟು- ಒಂದು ಕಪ್, ಅಕ್ಕಿ ಹಿಟ್ಟು-ಕಾಲು ಕಪ್, ಅರಶಿನ - ಅರ್ಧ ಟೀ ಸ್ಪೂನ್, ಹಸಿ ಮೆಣಸಿನ ಕಾಯಿ-ಎರಡು, ಉಪ್ಪು ರುಚಿಗೆ ತಕ್ಕ ಹಾಗೆ, ನೀರು- ಸ್ವೀಟ್ ಕಾರ್ನ್ ಬೇಯಿಸಲು.
ತಯಾರಿಸುವ ಕ್ರಮ
ಬಿಡಿಸಿದ ಸ್ವೀಟ್ ಕಾರ್ನ್ಗಳನ್ನು ನೀರಿನಲ್ಲಿ ಚೆನ್ನಾಗಿ ಬೇಯಿಸಬೇಕು (ಕುಕ್ಕರ್ನಲ್ಲಾದರೆ ಒಂದು ವಿಸಿಲ್). ಇದಕ್ಕೆ ಕಡ್ಲೆ ಹಿಟ್ಟು, ಅಕ್ಕಿ ಹಿಟ್ಟು, ಜೀರಿಗೆ, ಸಣ್ಣಗೆ ಹೆಚ್ಚಿದ ಹಸಿ ಮೆಣಸಿನ ಕಾಯಿ, ಅರಶಿನ ಪುಡಿ ಮತ್ತು ಉಪ್ಪನ್ನು ಹಾಕಿ, ಚೆನ್ನಾಗಿ ಕಲಸಬೇಕು. (ಅಗತ್ಯವಿದ್ದರೆ ಮಾತ್ರ ನೀರು ಹಾಕಿದರೆ ಸಾಕು. ಬೆಂದ ಸ್ವೀಟ್ ಕಾರ್ನ್ನಲ್ಲೇ ಸ್ವಲ್ಪ ನೀರು ಇರುತ್ತದೆ) ಹತ್ತು ನಿಮಿಷಗಳ ಬಳಿಕ, ಒಲೆ ಮೇಲೆ ಬಾಣಲೆಯಲ್ಲಿ ಎಣ್ಣೆ ಇಟ್ಟು, ಕಾದ ಎಣ್ಣೆಯಲ್ಲಿ ಎರಡು ಸ್ಪೂನ್ ಎಣ್ಣೆಯನ್ನು ಈ ಹಿಟ್ಟಿಗೆ ಹಾಕಿ ಮತ್ತೊಮ್ಮೆ ಕಲಸಬೇಕು. ಆಮೇಲೆ ಸ್ವಲ್ಪ ಸ್ವಲ್ಪವೇ ಹಿಟ್ಟನ್ನೂ ಉಂಡೆ ಮಾಡಿ ಸ್ವಲ್ಪ ಚಪ್ಪಟೆ ಮಾಡಿ ಎಣ್ಣೆಯಲ್ಲಿ ಬಿಡಬೇಕು. ಕೆಂಪಗಾದ ಮೇಲೆ, ಎಣ್ಣೆಯಿಂದ ತೆಗೆದರೆ ಮುಗಿಯಿತು. ಸಾಸ್ ಜೊತೆಗೋ ಅಥವಾ ಪುದೀನಾ ಚಟ್ನಿ ಜೊತೆಗೋ ಇದನ್ನು ತಿನ್ನಬಹುದು.
ಇಲ್ಲಿ ಬಂದಾಗ ಮಾಡಿ ಕೊಡು.
ReplyDeleteಮಾಲಾ
ಖಂಡಿತಾ ಮಾಡಿ ಕೊಡ್ತೆ.. ಹೆದರೆಡಿ! ನಿಮ್ಮ ವೈರಿಯನ್ನು ಬಡಿದೋಡಿಸುತ್ತೇನೆ :)
Deleteಛೆ ಛೆ ನನಗೆ ಬೇಡ. ನನ್ನ ವೈರಿಯನ್ನು ಇದಕ್ಕೆ ಸೇರಿಸಿದ್ದೀಯ.
ReplyDeleteಮಾಲಾ
ಮೂರು ರಸಕವಳಗಳ ರೆಸಿಪಿ ಇತ್ತುದಕ್ಕೆ ನಮ್ಮಿಬ್ಬರ ಧನ್ಯವಾದಗಳು.
ReplyDeleteಮುಂದಕ್ಕೂ ಇದೇರೀತಿಯ ರುಚಿ ರುಚಿಯ ಎಣ್ಣೆಯಲ್ಲಿ ಕರಿದ ತಿಂಡಿಗಳ ಒಡನೆ ಕೆಲವು
ಡಯಟ್ ಪಾಕಗಳೂ ಹರಿದು ಬರಲಿ.
ಅಡುಗೆಯ ವಿವರಣೆಯ ಚಿತ್ರ / ವಿವರಣೆ ನೈಜತೆ /ಸ್ಪಷ್ಟತೆ ಎಲ್ಲವೂ ಅಭಯ ಸಿಂಹ ದರ್ಜೆಯಲ್ಲೇ ಇವೆ.
ಅಭಯ ದಂಪತಿಗಳಿಗೆ ನಮ್ಮ ಅಭಿನಂದನೆಗಳು.
ನಮ್ಮ ಪ್ರಯತ್ನವನ್ನು ನೋಡಿ ಮೆಚ್ಚಿದ್ದಕ್ಕೆ ಧನ್ಯವಾದಗಳು ಸರ್. ಮುಂದಕ್ಕೆ ನೀವು ಹೇಳಿದಂತೆ ‘ಡಯಟ್ ಪಾಕ’ಗಳನ್ನೂ ತರುತ್ತೇನೆ.
Delete-ರಶ್ಮಿ.
This comment has been removed by the author.
ReplyDeleteRecipe laayakka kaanuthu! Naale maadi noduthe aatha!
ReplyDeleteThanks for the recipe!
Atte
ಜಯಶ್ರೀ ಅತ್ತೆ! ಮಾಡಿ ನೋಡಿ. ಲಾಯಿಕ ಆವ್ತು! ಹೇಂಗೆ ಆಯಿದು ಹೇಳಿ. ಕಾಯ್ತಾ ಇರ್ತೆ.
Deleteರಶ್ಮಿ
ಪಕೋಡದಲ್ಲಿ ಯಾರು ವೈರಿ? ಯಾವುದಕ್ಕೆ ವೈರಿ? ತಿಳಿಯಲಿಲ್ಲ.
ReplyDeleteಮೈಸೂರು ಪಾಕ್ ಸವಿಯುವಾಗ ಎರಡು ತಿಂಗಳಿನಿಂದ ಹಳಸಿದ ಪಂಡಿತ ಪ್ರಶ್ನೆಗೆ ನಾನಾದರೂ ಯಥಾಮತಿ ಪರಿಹಾರ ಕೊಡುವುದು ಅವಶ್ಯ ಎಂದು ಕಾಣಿಸಿತು: ರುಕ್ಮಿಣಿಮಾಲಾಳಿಗೆ ಅರ್ಥಾತ್ ರಶ್ಮಿಯ ಸಣ್ಣತ್ಯೋರಿಗೆ ಹೆಪ್ಪು ಹಾಕಿದ ಹಾಲಿನ ಯಾವುದೇ ಉತ್ಪನ್ನಗಳು ಕಡು ವೈರಿಗಳು :-) ಬಹುಶಃ ಹಿಂದೆ ಮೊಸರುಬಜ್ಜಿ ಮಾಡಿದ ಪಾತ್ರೆ ತೊಳೆಯದೆ ಪಕೋಡ ಹಾಕಿರುವಂತಿದೆ ರಶ್ಮಿ :-) :-)
Deleteಮೈಸೂರು ಪಾಕ್ ಸವಿಯುವಾಗ ಎರಡು ತಿಂಗಳಿನಿಂದ ಹಳಸಿದ ಪಂಡಿತ ಪ್ರಶ್ನೆಗೆ ನಾನಾದರೂ ಯಥಾಮತಿ ಪರಿಹಾರ ಕೊಡುವುದು ಅವಶ್ಯ ಎಂದು ಕಾಣಿಸಿತು: ರುಕ್ಮಿಣಿಮಾಲಾಳಿಗೆ ಅರ್ಥಾತ್ ರಶ್ಮಿಯ ಸಣ್ಣತ್ಯೋರಿಗೆ ಹೆಪ್ಪು ಹಾಕಿದ ಹಾಲಿನ ಯಾವುದೇ ಉತ್ಪನ್ನಗಳು ಕಡು ವೈರಿಗಳು :-) ಬಹುಶಃ ಹಿಂದೆ ಮೊಸರುಬಜ್ಜಿ ಮಾಡಿದ ಪಾತ್ರೆ ತೊಳೆಯದೆ ಪಕೋಡ ಹಾಕಿರುವಂತಿದೆ ರಶ್ಮಿ :-) :-)
Delete