ಸಾಮಾಗ್ರಿಗಳು
ಕ್ಯಾರೆಟ್ - ಎರಡು, ನಿಂಬೆ ಹುಳಿ - ಒಂದು, ಸಕ್ಕರೆ - ಎರಡು ಚಮಚ, ಏಲಕ್ಕಿ - ಕೆಲವು ಎಸಳುಗಳು, ನೀರು
ಮಾಡುವ ಕ್ರಮ
ಕ್ಯಾರೆಟ್‌ಗಳನ್ನು ತೊಳೆದು ತುರಿಯಬೇಕು. ತುರಿದ ಕ್ಯಾರೆಟ್ಟನ್ನು ನೀರು ಹಾಕಿ ಚೆನ್ನಾಗಿ ರುಬ್ಬಿ, ಸೋಸಬೇಕು. ಆಮೇಲೆ ಅದಕ್ಕೆ ಸಕ್ಕರೆ, ನಿಂಬೆ ಹಣ್ಣು ಹಾಗೂ ಕುಟ್ಟಿದ ಏಲಕ್ಕಿಯನ್ನು ಹಾಕಿ ಕಲಸಿ. ಕಾರೆಟ್ ಶರಬತ್ತು ತಯಾರು! ಮಾಡಲು ಸುಲಭ, ಕುಡಿಯಲು ಆರೋಗ್ಯಕರ. (ಕಾರೆಟ್‌ನಲ್ಲೇ ಸ್ವಲ್ಪ ಸಿಹಿ ಅಂಶ ಇರುವುದರಿಂದ ಸಕ್ಕರೆ ಹಾಕದೆ ಕೂಡ ಇದನ್ನು ಮಾಡಬಹುದು. ಸಕ್ಕರೆ ಕಡಿಮೆ ಮಾಡಿದಷ್ಟೂ ಆರೋಗ್ಯಕ್ಕೆ ಉತ್ತಮ.)
ರುಚಿ ಬದಲಾವಣೆಗೆ ಸಕ್ಕರೆಗೆ ಬದಲಿಯಾಗಿ ಜೇನೋ ಬೆಲ್ಲವೋ ಬಳಸಲೂ ಬಹುದು
ReplyDeleteದೇವಕಿ
ಧಾರಾಳವಾಗಿ! ಪಾಕ ಹೀಗೇ ಆಗಬೇಕೆಂದೇನೂ ಇಲ್ಲವಲ್ಲ!
Deleteರಶ್ಮಿ ನಿನ್ ಕನ್ನಡ ಲೈಕ್ ಇದ್ದು. ಸೊಗಡು ಹಾಂಗೇ ಇದ್ದು,
ReplyDeleteತುಂಬಾ ಖುಷಿ ಆವ್ತು ಹೀಂಗೆ ಹೇಳುವಗ.ನಿಂಗೊಗೆ ಧನ್ಯವಾದ.
Deleteರಶ್ಮಿ ಅಡುಗೆ ಬ್ಲಾಗ್ "ಕ್ಲಾಸ್ಸಿಕ್ ". ಸವಿವರ, ಅನುಕರಣೀಯ, ಸುಲಭ ,ಸಾತ್ವಿಕ ಆಹಾರದ ಅಡುಗೆ ಮಾಹಿತಿ- ಬಂಬಾಟ್.
ReplyDeleteಆಕರ್ಷಕ ವಿಡಿಯೋ - ಆಡಿಯೋ ಕನ್ನಡಿಗರ ಹೆಮ್ಮೆಗೊಂದು ಗರಿ.
ನೀವು ನನ್ನ ಬ್ಲಾಗ್ ಇಷ್ಟಪಟ್ಟದ್ದು ನಿಜಕ್ಕೂ ನನಗೆ ಹೆಮ್ಮೆಯ ಸಂಗತಿ. ಜೊತೆಗೆ ನಿಮ್ಮ ಸಲಹೆ,ತಿದ್ದುಪಡಿಗಳನ್ನೂ ಅವಶ್ಯ ತಿಳಿಸಿ.
ReplyDeleteರಶ್ಮಿ ತುಂಬಾ ಒಳ್ಳೆ ಐಡಿಯಾ ಇದು... ಬ್ಲಾಗ್ ಸಂಸ್ಕ್ರತಿಗೆ ಹೊಸ ಲುಕ್.. ಕ್ಯಾರೆಟ್ ಜ್ಯೂಸ್ಗಿಂತಲು ರುಚಿಯಾಗಿರುವುದು ನಿನ್ನ ಕನ್ನಡ...
ReplyDeleteತುಂಬಾ ಖುಶಿ ಆಯ್ತು ನಿನ್ನ ಪ್ರತಿಕ್ರಿಯೆ ನೋಡಿ.
ReplyDelete