Saturday, September 29, 2012

ಪಾಲಕ್ ಪ್ರಸಂಗ



ಸಾಮಾಗ್ರಿಗಳು

ಪಾಲಕ್ ಸೊಪ್ಪು - ಒಂದು ಕಟ್ಟು, ಕೊತ್ತಂಬರಿ ಸೊಪ್ಪು - ಸ್ವಲ್ಪ, ಟೊಮ್ಯಾಟೊ - ಒಂದು, ಹಸಿಮೆಣಸಿನ ಕಾಯಿ - ಮೂರು, ನೆಲಕಡಲೆ - ನಾಲ್ಕು ಚಮಚ, ಗಸಗಸೆ - ಎರಡು ಚಮಚ, ನೀರುಳ್ಳಿ - ಎರಡು, ಸ್ವೀಟ್ ಕಾರ್ನ್ - ಎರಡು ಮುಷ್ಟಿ, ದೊಡ್ದ ಮೆಣಸು - ಒಂದು, ಎಣ್ಣೆ - ನಾಲ್ಕು ಚಮಚ, ಉಪ್ಪು- ರುಚಿಗೆ ತಕ್ಕ ಹಾಗೆ.


ಪಾಲಕ್ ಗಸಿ ತಯಾರಿಸುವ ಕ್ರಮ

ನೆಲಗಡಲೆ ಮತ್ತು ಗಸಗಸೆಯನ್ನು ಬೇರೆಬೇರೆಯಾಗಿ ಹುರಿದು, ಮಿಕ್ಸಿ ಜಾರಲ್ಲಿ ಹಾಕಿಡಿ (ಎಣ್ಣೆ ಹಾಕದೆ). ಒಂದು ಬಾಣಲೆಯಲ್ಲಿ ಎರಡು ಚಮಚ ಎಣ್ಣೆ ಹಾಕಿ, ಅದು ಬಿಸಿ ಆದ ಮೇಲೆ ತೊಳೆದ ಪಾಲಕ್ ಸೊಪ್ಪನ್ನು ಹಾಕಿ ಬಾಡಿಸಿ. ಸುಮಾರು ಐದು ನಿಮಿಷ ಇದು ಒಲೆಯ ಮೇಲಿರಲಿ. ಆಮೇಲೆ ಒಲೆ ಆರಿಸಿ ಇದನ್ನು ತಣಿಯಲು ಬಿಡಿ. ಇದು ಸ್ವಲ್ಪ ತಣ್ಣಗಾದ ಮೇಲೆ ಗಸಗಸೆ ಮತ್ತು ನೆಲಗಡಲೆ ಹಾಕಿರುವ ಮಿಕ್ಸಿ ಜಾರಿಗೆ ಹಾಕಿ. ಜೊತೆಗೆ ಕೊತ್ತಂಬರಿ ಸೊಪ್ಪು, ಕತ್ತರಿಸಿದ ಟೊಮ್ಯಾಟೊ, ಹಸಿ ಮೆಣಸುಗಳನ್ನೂ ಸೇರಿಸಿ ನುಣ್ಣಗೆ ಕಡೆಯಿರಿ. (ಬೇಕಾದರೆ ನೀರು ಸೇರಿಸಬಹುದು. ಪಾಲಕ್ ಸೊಪ್ಪಿನಲ್ಲೇ ಸ್ವಲ್ಪ ನೀರಿರುತ್ತದೆ)

ಬಾಣಲೆಗೆ ಎರಡು ಚಮಚ ಎಣ್ಣೆ ಹಾಕಿ ಕತ್ತರಿಸಿದ ಈರುಳ್ಳಿ, ದೊಡ್ಡ ಮೆಣಸು ಹಾಗೂ ಸ್ವೀಟ್ ಕಾರ್ನ್ಗಳನ್ನು ಒಂದಾದ ಮೇಲೊಂದು ಹಾಕುತ್ತಾ ಸಣ್ಣ ಒಲೆಯಲ್ಲಿ ಹುರಿಯಿರಿ. ಎರಡು ನಿಮಿಷ ಮುಚ್ಚಿಟ್ಟು ಉಪ್ಪು ಹಾಕಿ ಮತ್ತೆ ಮುಚ್ಚಿಡಿ. ಏಳೆಂಟು ನಿಮಿಷ ಬೇಯಲಿ. ಆಮೇಲೆ ಕಡೆದಿರುವ ಮಸಾಲೆಯನ್ನು ಇದಕ್ಕೆ ಸೇರಿಸಿ. (ನೀರು ಬೇಕಾದರೆ ಸೇರಿಸಬಹುದು. ಗಟ್ಟಿಯಾಗಿರಬೇಕಾದರೆ, ನೀರು ಹಾಕುವುದು ಬೇಡ.) ಎರಡು ನಿಮಿಷ ಕುದಿಸಿ ಒಲೆ ಆರಿಸಿ. ಪಾಲಕ್ ಗಸಿ ಈಗ ರೆಡಿ! ಇದು ಚಪಾತಿಯ ಜೊತೆ ನಂಚಿಕೊಳ್ಳಲು ಬಹಳ ಚೆನ್ನಾಗಿ ಸೇರುತ್ತದೆ.

10 comments:

  1. ತುಂಬಾನೇ ಸುಲಭ ವಿಧಾನ .. ತಿಳಿಸಿದ್ದಿರಿ thank u ರಶ್ಮಿ

    ReplyDelete
    Replies
    1. Thank you for visiting "Home Made" :) Try maadi, nange heli.

      Delete
  2. ಶಾಭಾಷ್ ಕೂಸೇ, ನಮ್ಮಲ್ಲಿ ಪಾಲಾಕ್ ಸೊಪ್ಪು ಇಲ್ಲ, ಆದರೆ ನೆಲ ಬಸಳೆ ಉ೦ಟು, ಅದನ್ನು ಉಪಯೋಗಿಸುವಾ ಅ೦ತ ಅರ್ಧಾ೦ಗಿ ಫ಼ರ್ಮಾನು ಹೊರಡಿಸಿದ್ದಾಳೆ ! So, taste of pudding lies in its eating ! Judgemnt on---------- date !
    ಅಡುಗೆ ಮಾಡಿ ಸವಿದ ಬಳಿಕ ತಿಳಿಸುತ್ತೇನೆ, ಥಾ೦ಕ್ಸ್ !

    ReplyDelete
    Replies
    1. ಥ್ಯಾಂಕ್ಸ್ ತಮ್ಮಣ್ಣ ಮಾವ! I'm sure, ಶ್ರೀದೇವಿ ಅತ್ತೆ ಮಾಡಿದ್ರೆ ಅದು ಬೊಂಬಾಟ್ ಆಗಿ ಇರ್ತದೆ :)

      Delete
  3. noodidaagle hotte thumbthu, innu thinno avashyakathe illa sisterr

    ReplyDelete
  4. Laxminarayana Bhat POctober 1, 2012 at 11:16 AM

    Hello Rashmi, I am impressed with your new talent in the kitchen. Congratulations!

    ReplyDelete
  5. Namaskaara Rashmi,
    Ninna aduge videogalanna nodthidde,ninna talent nodi khushiyaaithu.Keep going.All the best.

    -Ramachandra Guddehithlu

    ReplyDelete
    Replies
    1. ರಶ್ಮಿ ಅಭಯ ಸಿಂಹOctober 10, 2012 at 11:47 AM

      ನಿಮ್ಮ ಪ್ರತಿಕ್ರಿಯೆ ನೋಡಿ ತುಂಬಾ ಖುಷಿ ಆಗ್ತಾ ಉಂಟು! ಈ ನೆಪದಲ್ಲಿ ನಾನೂ ಹೊಸ ಅಶಿಗೆಗಳನ್ನು ಕಲೀತಾ ಇದ್ದೇನೆ. ತುಂಬಾ ಥ್ಯಾಂಕ್ಸ್ ರಾಮಣ್ಣ :)

      Delete