Saturday, September 29, 2012

ಬಸಳೆ ಸೊಪ್ಪಿನ ರಾಯತ (ಮೊಸರು ಬಜ್ಜಿ)

ಸಾಮಾಗ್ರಿಗಳು

ಬಸಳೆ ಎಲೆ - ಸುಮಾರು ಹತ್ತು, ಈರುಳ್ಳಿ- ಒಂದು, ಹಸಿ ಮೆಣಸು - ಎರಡು, ಜೀರಿಗೆ - ಒಗ್ಗರಣೆಗೆ ಬೇಕಾದಷ್ಟು (ಸುಮಾರು ಒಂದು ಟೀ ಸ್ಪೂನ್), ತುಪ್ಪ- ನಾಲ್ಕು ಚಮಚ, ಮೊಸರು - ಎರಡು ಕಪ್ಪ್, ರುಚಿಗೆ ತಕ್ಕಷ್ಟು ಉಪ್ಪು



ತಯಾರಿಸುವ ಕ್ರಮ

ಬಸಳೆ ಸೊಪ್ಪನ್ನು ತೊಳೆದು ನೀರಿನ ಪಸೆ ಇಲ್ಲದ ಹಾಗೆ ಒರಸಿಡಿ. ಆಮೇಲೆ ಅದನ್ನು ಸಣ್ಣಕ್ಕೆ ಕತ್ತರಿಸಿ, ಸಣ್ಣ ಬಾಣಲೆಯೋ ಅಥವಾ ಒಗ್ಗರಣೆ ಸೌಟಿನಲ್ಲೋ ಎರಡು ಸ್ಪೂನ್ ತುಪ್ಪ ಹಾಕಿ ರೋಸ್ಟ್ ಮಾಡಿಕೊಳ್ಳಿ. ಅದರ ಲೋಳೆತನವೆಲ್ಲ ಹೋಗಿ ನಸು ಕಂದು ಬಣ್ಣಕ್ಕೆ ತಿರುಗಿ ಗರಿ ಗರಿ ಆಗುವಾಗ ಸ್ಟೌ ಆರಿಸಿ. ಅದು ತಣ್ಣಗಾಗಲಿ. ಅದು ತಣ್ಣಗಾಗುವ ಸಮಯದಲ್ಲಿ ಈರುಳ್ಳಿ ಮತ್ತು ಹಸಿ ಮೆಣಸಿನ ಕಾಯಿಯನ್ನು ಸಾಧ್ಯವಾದಷ್ಟು ಸಣ್ಣದಾಗಿ ಹೆಚ್ಚಿಟ್ಟುಕೊಳ್ಳಿ. ಇಷ್ಟರಲ್ಲಿ ತಣ್ಣಗಾಗಿರುವ ಮಿಶ್ರಣವನ್ನು ಒಂದು ಗುಂಡು ಕಲ್ಲೋ ಇಲ್ಲಾ ಕುಟ್ಟಾಣಿಯಲ್ಲೋ ಅರೆಯಿರಿ. ಪೇಸ್ಟ್ ಥರ ಆಗಬೇಕೆಂದೇನಿಲ್ಲ. ಅದರ ರಸ ಬಿಟ್ಟರಾಯಿತು. ನಂತರ ಒಂದು ಬಾಣಲೆಗೆ ಎರಡು ಸ್ಪೂನ್ ತುಪ್ಪ ಹಾಕಿ  ಜೀರಿಗೆ, ಸಣ್ಣಗೆ ಹೆಚ್ಚಿದ ನೀರುಳ್ಳಿ, ಹಸಿ ಮೆಣಸಿನ ಕಾಯಿ ಹಾಕಿ ರೋಸ್ಟ್ ಮಾಡಿ. ಒಲೆ ಆರಿಸಿ, ಸ್ವಲ್ಪ ತಣ್ಣಗಾದ ಮೇಲೆ ಅರೆದ ಬಸಳೆ ಸೊಪ್ಪನ್ನೂ ಸೇರಿಸಿ. ಚೆನ್ನಾಗಿ ಮಿಶ್ರ ಮಾಡಿ. ಮಿಶ್ರಣವನ್ನು ತಂಪಾದ ಮೊಸರಿಗೆ ಸೇರಿಸಿ ಅವರವರ ರುಚಿಗೆಷ್ಟು ಬೇಕೋ ಅಷ್ಟು ಉಪ್ಪನ್ನೂ ಸೇರಿಸಿ. ಊಟಕ್ಕೂ ರುಚಿ, ಪುಲಾವ್ ಜೊತೆಯಂತೂ ಮತ್ತಷ್ಟು ಖುಶಿ!

ನೀವೂ ಟ್ರೈ ಮಾಡಿ ಆಮೇಲೆ ಹೇಗಾಯ್ತೂಂತ ನಂಗೆ ಬರೀರಿ! ಕಾಯ್ತಿರ್ತೇನೆ...

13 comments:

  1. ಅಭಿನಂದನೆಗಳು ಅತ್ತೆ ಮಾವರಿಂದ.
    ಕಿಚನ್, ಸ್ಪೂನ್, ರೋಸ್ಟ್, ಕಪ್ಪ್, ಸ್ಟೌ, ಪೇಸ್ಟ್, ಟ್ರೈ ಇಲ್ಲಿ ಬರವಣಿಗೆಯಲ್ಲಿರುವವಕ್ಕೇ ಸುಲಭ ಸಹಜ ಕನ್ನಡ ಪರ್ಯಾಯ ಶಬ್ದಗಳಿರುತ್ತಾ ನಾವು ಬಡವರಾಗಬಾರದು. ಮಾತಿನಲ್ಲಾದರೂ ಪರಿಸರ ಮಾಲಿನ್ಯ ಕ್ಷಮ್ಯ.
    ದೇವಕಿ, ಅಶೋಕ

    ReplyDelete
  2. Rashiiiiiii !!! Neenu adige website madidi antha gothe irlilla ! Super mathadthi.... Basalle illi sikidre madthene idu raita !!!!

    ReplyDelete
    Replies
    1. Thank you Smitha!!! Hey.. basale sikkidre madi. Tampu tampu ... Bahala Ruchi :)

      Delete
  3. @ ಅತ್ತೆ ಮಾವ,

    ಧನ್ಯವಾದಗಳು! ನಿಮ್ಮ ಸಲಹೆ ಒಪ್ಪಿದೆ. ಈ ಎಲ್ಲಾ ಇಂಗ್ಲೀಶ್ ಶಬ್ದಗಳಿಗೆ ಪರ್ಯಾಯ ಕನ್ನಡ ಪದ ಗೊತ್ತಿಲ್ಲದೆ ಅಲ್ಲ. Contemporary ಎನ್ನಿಸಿಕೊಳ್ಳಿಕ್ಕೆ ಹೊರಟ(ವ್ಯರ್ಥ)ಪ್ರಯತ್ನ! ಮುಂದಿನ ಸಂಚಿಕೆಯಿಂದ ಬದಲಾಯಿಸುವೆ.

    ReplyDelete
  4. congrates...Expecting more recepies...

    ReplyDelete
    Replies
    1. @ SN Bhat Nerolu

      Thank you so much! I'm trying out new stuffs. Will keep posting.

      Delete
  5. ರಶ್ಮಿ
    ನೀನು ಪ್ರಾರಂಭ ಮಾಡಿದ ಅಡುಗೆ ಬ್ಲಾಗ್ ಬಹಳ ಚೆನ್ನಾಗಿದೆ. ನಿನ್ನ ಎದುರು ಕ್ಯಾಮಾರಹಿಡಿದು, ಅಲ್ಲದೆ ಮಾಡಿದ ಅಡುಗೆಗೆ ನ್ಯಾಯ ಸಲ್ಲಿಸಿ (ಅದಕ್ಕೆ ಹೊಸ ಹೆಸರು ಸೂಚಿಸುವ!) ನಿನಗೆ ಬೆಂಬಲ ನೀಡುವ ನಿನ್ನ ಗಂಡನಿಗೆ ಕೂಡ ಅಭಿನಂದನೆ ಹೇಳುತ್ತೇನೆ.ಸಂತೋಷವಾಯಿತು.
    ಆದರೆ ಈರುಳ್ಳಿ ಮತ್ತು ಹಸಿ ಮೆಣಸಿನ ಕಾಯಿಯನ್ನು ಸಾಧ್ಯವಾದಷ್ಟು ಸಣ್ಣದಾಗಿ ಹೆಚ್ಚಿಟ್ಟುಕೊಳ್ಳಿ. ಇದೇ ಕಷ್ಟದ್ದು! ಸುರು ಸಣ್ಣ ಎಂದಾಗಿ ಅದು ನೋಡುವಾಗ ದೊಡ್ದದಾಗೇ ಇರುತ್ತದೆ!
    ಮಾಲಾ

    ReplyDelete
    Replies
    1. ಹೌದು. ಅಭಯನ ಕೊಡುಗೆ ಅಪಾರ. ಸಣ್ಣ ದೊಡ್ಡದ ಅಳತೆ ಕೊಟ್ಟವರ್ಯಾರು? ನೀವು ಕತ್ತರಿಸಿದ್ದೇ ಸಣ್ಣ ಎಂದುಕೊಂಡರಾಯಿತು :)

      ರಶ್ಮಿ.

      Delete
  6. ರಶ್ಮಿ
    ನಿನ್ನ ಬರವಣಿಗೆ ಹಾಗೂ ಮಾತಿನಲ್ಲಿ ನನ್ನ ಸಲಹೆ ಕೂಡ ನಿನ್ನ ಅತ್ತೆ ಮಾವ ಸೂಚಿಸಿದುದೇ ಆಗಿದೆ.
    ಮಾಲಾ

    ReplyDelete
  7. abhayanna video madidda henge Rashmiji??? nice program Best of luck,,,,,

    ReplyDelete
    Replies
    1. Houdu Amit avre.. Thanks for your wishes :)
      -Rashmi.

      Delete
  8. nela basaLeyinda maadide!!! Superrrrrrrrrb taste!!
    Akshari

    ReplyDelete
    Replies
    1. ರಶ್ಮಿ ಅಭಯ ಸಿಂಹOctober 17, 2012 at 10:37 PM

      Thanks ಅತ್ತಿಗೆ!!!

      Delete