ಸಾಮಗ್ರಿಗಳು
ಅಕ್ಕಿ - ಒಂದು ಕಪ್, ರುಚಿಗೆ ತಕ್ಕಷ್ಟು ಉಪ್ಪು, ನೀರು, ಎಣ್ಣೆ/ತುಪ್ಪ
ಮಾಡುವ ಕ್ರಮ
ಅಕ್ಕಿಯನ್ನು ಒಂದು ಗಂಟೆಯಷ್ಟು ಹೊತ್ತು ನೆನೆಸಬೇಕು. ಅದಕ್ಕೆ ಸಾಕಷ್ಟು ನೀರು ಹಾಕಿ (ಉದ್ದಿನ ದೋಸೆಗಿಂತ ತೆಳ್ಳಗಾಗುವಷ್ಟು) ನುಣ್ಣಗೆ ರುಬ್ಬಬೇಕು. ಹಿಟ್ಟಿನ ಸಾಂದ್ರತೆ ಬಹಳ ತೆಳುವಾಗಿರಬೇಕು. ಆಮೇಲೆ ಕಾವಲಿಗೆ ತುಪ್ಪ/ಎಣ್ಣೆ ಸವರಿ ದೋಸೆ ಎರೆಯುತ್ತಾ ಬರಬೇಕು. ಕಾವಲಿಯಿಂದ ಸೌಟನ್ನು ಎತ್ತರದಲ್ಲಿ ಇಟ್ಟುಕೊಂಡು ಹಿಟ್ಟನ್ನು ಕಾವಲಿಗೆ ಎರಚುವುದು ನೀರು ದೋಸೆ ಎರೆಯುವ ಕ್ರಮ. ಇದನ್ನು ಮೊಗಚಿ ಹಾಕುವುದು ಬೇಡ.
(ಅಕ್ಕಿ ರುಬ್ಬುವಾಗ ತೆಂಗಿನ ತುರಿ ಅಥವಾ ಮುಳ್ಳು ಸೌತೆ ಹಾಕಿಯೂ ನೀರು ದೋಸೆ ಮಾಡಬಹುದು. ರುಚಿಯಾಗಿರುತ್ತದೆ)
ಞಮ್ಮಳ್ ಇದ್ಕೆ ಕೋತಿಮರಿ ಚಟ್ಟುಣಿ ಮಾಡ್ತು, ಫಸ್ಟ್ ಕಿಳಾಸ್ :-)
ReplyDelete-ಕುಞಪ್ಪ
ಧನ್ಯವಾದಗಳು!
Deleteಮಂಗಳೂರಿನ ರುಚಿಯೇ ಬೇರೆ ಅಲ್ವಾ? :) ಪ್ರೆಸೆಂಟೇಶನ್ ತುಂಬಾ ಚೆನ್ನಾಗಿದೆ.
ReplyDeleteಪ್ರತಿಭಾ ಅವ್ರೇ.. ಮೊದಲು ನಿಮಗೆ ಧನ್ಯವಾದ. ನೀವು ಹೀಗೇ ಮಾಡಿದ್ರೂ ಚೆನ್ನಾಗಿರ್ತದೆ. ಮಂಗಳೂರ ರುಚಿ ಬೇರೆಯೇ ಎಂದೆನಿಸುವುದಿಲ್ಲ ನಂಗೆ. ಮತ್ತೆ ನಮ್ಮಜ್ಜಿಯೋ ಅಮ್ಮನೋ ಮಾಡಿದ್ರೆ ಅದರ ರುಚಿ ಖಂಡಿತಾ ನಾ ಮಾಡಿದ್ದಕ್ಕಿಂತ ಸೊಗಸಾಗಿರ್ತದೆ ಅಂತ ಹೇಳಬಲ್ಲೆ !
Deleteತಿಂಗಳ ಹಿಂದಿನ ನೀರು ದೋಸೆ ಹಳಸಿದೆ, ಬಿಸಿ ತಿನಿಸು ಬೇಕು. ಅಡ್ಗೆ ಮನೆ ಖಾಲಿನಾ ಇಲ್ಲ, ಡೈರಿಲಿ ಹಾಳೆಗಳಿಲ್ವಾ?
ReplyDelete