Friday, November 9, 2012

ಅವಲಕ್ಕಿ ದೋಸೆ


ಸಾಮಗ್ರಿಗಳು
ಅಕ್ಕಿ - ಎರಡು ಕಪ್, ಅವಲಕ್ಕಿ - ಒಂದು ಕಪ್, ಹುಳಿ ಮೊಸರು - ಅರ್ಧ ಕಪ್, ರುಚಿಗೆ ತಕ್ಕಷ್ಟು ಉಪ್ಪು, ಎಣ್ಣೆ/ತುಪ್ಪ



ಮಾಡುವ ಕ್ರಮ

ಅಕ್ಕಿಯನ್ನು ಒಂದು ಗಂಟೆ ನೆನಸಬೇಕು. ಆಮೇಲೆ ತರಿ ತರಿಯಾಗಿ ರುಬ್ಬಿ, ಅದಕ್ಕೆ ಉಪ್ಪು, ಹುಳಿ ಮೊಸರು ಹಾಗೂ ಅವಲಕ್ಕಿಯನ್ನು ಸೇರಿಸಿ ಮತ್ತೊಮ್ಮೆ ನುಣ್ಣಗೆ ರುಬ್ಬಬೇಕು. ಆಮೇಲೆ ಕಾವಲಿಗೆ ಎಣ್ಣೆ/ತುಪ್ಪ ಸವರಿ ದೋಸೆ ಎರೆದು ಎರಡೂ ಕಡೆ ಬೇಯಿಸ ಬೇಕು.

3 comments:

  1. ಅಮ್ಸರ ಭಟ್ರುNovember 10, 2012 at 7:02 AM

    ಉಡಾಫೆ ಹೊಡ್ದು ಎಲ್ಲಾ ಒಟ್ಗೇ ಒಮ್ಮೆಗೇ ಹಾಕ್ಕೊಂಡು ನುಣ್ಗಾಗೋವರೆಗೂ ರುಬ್ಬುದೆ. ಹಿಟ್ ತಯಾರಾಗೋ ಹೊತ್ಗೆ ಚುಟ್ಟಿಕಿಟ್ಟಕ್ಕೇ ಅದರ ಮೇಲೆ ಬೆಣ್ಣೇನೇ ಸಿಕ್ಬಿಡ್ತು :-)
    ಅಮ್ಸರ ಭಟ್ರು

    ReplyDelete
  2. ರಶ್ಮಿ ಅಭಯ ಸಿಂಹNovember 15, 2012 at 5:28 PM

    ಎಲ್ಲಾ ಒಟ್ಟಿಗೆ ಹಾಕ್ಬಹುದು. ಆದ್ರೆ ನುಣ್ಣಗಾದದ್ದು ಸುಲಭಕ್ಕೆ ಗೊತ್ತಾಗ್ಲಿಕ್ಕಿಲ್ಲ. ಎರಡು ನಿಮಿಷ ಬಿಟ್ಟರೆ ಅವಲಕ್ಕಿ ಉಬ್ಬಲು ಶುರುವಾಗುತ್ತದೆ! ಆವಾಗ ಮತ್ತೊಮ್ಮೆ ರುಬ್ಬಲೇಬೇಕಾದ ಅನಿವಾರ್ಯತೆ ಬರುತ್ತದೆ ಭಟ್ರೇ.. ಹಾಗಾಗಿ ನಾನು ಹೇಳಿದಂತೆ ಮಾಡುದೇ ಉತ್ತಮ.

    ReplyDelete
  3. ಅವಲಕ್ಕಿ ದೋಸೆ ಬೊಂಬಾಟ್ ಮಿಸ್... ಟ್ರೈ ಮಾಡಿ ನೋಡ್ತೀನಿ...

    ReplyDelete