ಬೇಕಾಗುವ ಸಾಮಗ್ರಿಗಳು :
1 ಕಪ್ ಕಡ್ಲೆ ಹಿಟ್ಟು
1 ಕಪ್ ಸಕ್ಕರೆ (ಜಾಸ್ತಿ ಬಯಸುವವರು ಹೆಚ್ಚು ಹಾಕಲೂ
ಬಹುದು)
1 ಕಪ್ ತುಪ್ಪ
ತಯಾರಿಸುವ ಕ್ರಮ:
ಮೊದಲು ಕಡ್ಲೆ ಹಿಟ್ಟನ್ನು ಹುರಿದುಕೊಳ್ಳುವುದು.
ಇದೇ ಸಮಯದಲ್ಲಿ ಪಕ್ಕದ ಒಲೆಯ ಮೇಲೆ ಇನ್ನೊಂದು ಬಾಣಲೆ ಇಟ್ಟು, ಒಂದು ಕಪ್ ಸಕ್ಕರೆಗೆ
ಸ್ವಲ್ಪ ನೀರು ಹಾಕಿ ಕುದಿಸುವುದು. ಈ ಕುದಿ ಮಂದವಾಗಿ ಪಾಕ ನೂಲಿಗೆ ಬಂದಾಗ ಹುರಿದಿಟ್ಟ ಕಡ್ಲೆ ಹಿಟನ್ನು
ಹಾಕುವುದು. ಚೆನ್ನಾಗಿ ಕಲೆಸಿ, ಸ್ವಲ್ಪ ಸ್ವಲ್ಪವೇ ತುಪ್ಪ ಹಾಕುತ್ತಾ ಬರುವುದು. ಗುಳ್ಳೆಗಳು ಬಂದು, ತಳ ಬಿಟ್ಟು ಪಾಕ ಸ್ವಲ್ಪ ಮುದ್ದೆಯಂತಾದಾಗ, ಒಂದು ತುಪ್ಪ ಸವರಿದ ಬಟ್ಟಲಿಗೆ ಈ ಪಾಕವನ್ನು ಇಳಿಸುವುದು.
(ಇಷ್ಟ ಪಡುವವರು ಏಲಕ್ಕಿ ಹಾಕಬಹುದು, ಹಾಗೆಯೇ ಸಿಹಿ ಪದಾರ್ಥಗಳಿಗೆ ವಾಡಿಕೆಯಂತೆ ಒಂದು ಚಿಟಿಕಿ ಉಪ್ಪನ್ನೂ ಹಾಕಬಹುದು)
ಚಪ್ಪರಿಸಿಕೊಂಡು ತಿಂದವರೆಲ್ಲಾ ಕೈ ಬಾಯಿ ಒರೆಸಿಕೊಂಡು ಹೋಗಿಯೇ ಬಿಟ್ಟರು ಅಂದುಕೊಳ್ಳುತ್ತಿರುವಂತೆ ನಾನು ಕೇಳ್ತೇನೆ ಮತ್ಯಾವಾಗ? ಏನು ಹೊಸತು?
ReplyDelete