Friday, January 4, 2013

ಕಾಯಿ ಬರ್ಫಿ


ಸಾಮಗ್ರಿಗಳು 

ತೆಂಗಿನ ತುರಿ - ಎರಡು ಕಪ್, ಸಕ್ಕರೆ - 1  1/2 ಕಪ್, ನೀರು - ಸ್ವಲ್ಪ, ಏಲಕ್ಕಿ -  ನಾಲ್ಕೈದು ಎಸಳುಗಳು, ಕಡ್ಲೆ ಹಿಟ್ಟು - ಎರಡು ಚಮಚ, ತುಪ್ಪ -  ನಾಲ್ಕು ಚಮಚ


ಮಾಡುವ ವಿಧಾನ

ಒಂದು ಬಾಣಲೆಗೆ ಒಂದು ಚಮಚ ತುಪ್ಪ ಹಾಕಿ ತೆಂಗಿನ ತುರಿಯನ್ನು ಹುರಿದಿಟ್ಟುಕೊಳ್ಳಬೇಕು. ಇನ್ನೊಂದು ಬಾಣಲೆಯಲ್ಲಿ ಸಕ್ಕರೆಗೆ ಸ್ವಲ್ಪ ನೀರು ಹಾಕಿ ಪಾಕ ಮಾಡಿಕೊಳ್ಳಬೇಕು. ತೀರಾ ದಪ್ಪ ಪಾಕವಾಗುವ ಅಗತ್ಯವಿಲ್ಲ. ಸಕ್ಕರೆ ಕರಗಿ ದ್ರಾವಣ ಸ್ವಲ್ಪ ದಪ್ಪಗಾಗುತ್ತಲೇ ಅದಕ್ಕೆ ಹುರಿದಿಟ್ಟುಕೊಂಡ ತೆಂಗಿನ ತುರಿಯನ್ನು ಹಾಕಿ ಚೆನ್ನಾಗಿ ಕಲಕಬೇಕು. ಕಾಸುತ್ತಾ ಇದ್ದು, ಸ್ವಲ್ಪ ನೊರೆ ಬಂದಾಗ ಕಡ್ಲೆ ಹಿಟ್ತನ್ನು ಸೇರಿಸಿ, ಏಲಕ್ಕಿ ಪುಡಿಯನ್ನೂ ಸೇರಿಸಿ, ಇನ್ನೂ ಎರಡು ಮೂರು  ನಿಮಿಷ ಸಲ್ಪ ಸ್ವಲ್ಪ  ತುಪ್ಪ ಹಾಕುತ್ತಾ ಕಾಸಬೇಕು. ತಳ ಬಿಡುವಾಗ ತುಪ್ಪ ಸವರಿದ ತಟ್ಟೆಗೆ ವರ್ಗಾಯಿಸಬೇಕು. 
ಆಮೇಲೆ ನಮಗೆ ಬೇಕಾದ ಆಕಾರಕ್ಕೆ ಕತ್ತರಿಸಿದರಾಯಿತು.

1 comment: